ಪೂಜ್ಯ ಮಾತಾಜಿಯವರು ಎರಡು ನೂರಕ್ಕು ಹೆಚ್ಚು ಪುಸ್ತಕಗಳನ್ನು ಸ್ವತಃ ಬರೆದು, ವಿಶ್ವಕಲ್ಯಾಣ ಮಿಷನ್ ಸುಯಿಧಾನ ಸುಗ್ರಂಥ ಮಾಲೆಯಲ್ಲಿ ಪ್ರಕಾಶಿಸಿ 1000ಕ್ಕೂ ಹೆಚ್ಚು ಗ್ರಂಥಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಅದರಲ್ಲಿ ತರಂಗಿಣಿ, ಹೆಪ್ಪಿಟ್ಟ ಹಾಲು ಜನಪ್ರಿಯ ಕಾದಂಬರಿಗಳಿಗೆ ಕರ್ನಾಟಕ ರಾಜ್ಯ ಅಕಡಾಮಿ ಪ್ರಶಸ್ತಿ ಲಭಿಸಿವೆ. ಕಾಲೇಜ್ ವಿಧ್ಯಾರ್ಥಿಯಾಗಿದ್ದಾಗ ಬರೆದಿದ್ದ ಬಸವ ತತ್ತ್ವ ದರ್ಶನ ಪುಸ್ತಕವು ಎಂ ಎ ತತ್ತ್ವಜ್ಞಾನ ಓದುತ್ತಿದ್ದಾಗಿ ತಮಗೆನೇ ಪಠ್ಯ ಪುಸ್ತಕವಾಗಿ ಬಂದಿದ್ದು ಅವರ ವಿದ್ವತ್ತಗೆ ಹಿಡಿದ ಕೈಗನ್ನಡಿ.
ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕವಾಗಿ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದರು. ಐದು ದಶಕಗಳಿಂದಲೂ ಬಸವತತ್ತಕ್ಕಾಗಿ ತಮ್ಮ ಜೀವನವನ್ನು ಶ್ರೀಗಂಧದಂತೆ ಸವೆಸಿದ ಪೂಜ್ಯ ಮಾತಾಜಿ; ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ, ಸ್ವಾರ್ಥಕ್ಕಾಗಿ ಯಾರನ್ನು ಓಲೈಸಿದೆ, ನೇರ ನಡೆ-ನುಡಿ ಮತ್ತು ಜನಪರ ನಿಲುವುಗಳಿಗೆ ಹೆಸರುವಾಸಿಯಾಗಿದ್ದರಲ್ಲದೆ, ಮಹಿಳಾ ಜಗದ್ಗುರುಗಳಾಗಿ ಸಾಮಾಜಿಕವಾಗಿ ಅನೇಕ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದವರು. ಹೊರ ರಾಜ್ಯಗಳಲ್ಲಿ ಬಸವಧರ್ಮ ಸಮ್ಮೇಳನಗಳನ್ನು ಮಾಡಿ, ದೇಶ ವಿದೇಶದಲ್ಲಿ ಸಂಚರಿಸಿ ಬಸವ ತತ್ತ್ವವನ್ನು ವ್ಯಾಪಕವಾಗಿ ಪ್ರಚಾರ ಗೈದವರಲ್ಲಿ ಮೊದಲಿಗ