ಪ್ರವಚನ ಪಿತಾಮಹ ಪೂಜ್ಯ ಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಸ್ವಾಮೀಜಿಯವರು.

Poojya Lingananda Swamiji

ಪೂಜ್ಯಶ್ರೀ ಲಿಂಗಾನಂದರು ಬಿಜಾಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ 15 ಸೆಪ್ಟೆಂಬರ್ 1931ರಂದು ಜನಿಸಿದರು. ಬಿ. ಎ. ಆನರ್ಸ್ ಪದವೀಧದರರಾಗಿ, 25 ಏಪ್ರಿಲ್ 1955ರಂದು ಅಧ್ಯಾತ್ಮಿಕ ಮಾನಸಾಂತರ ಹೊಂದಿ, 19 ನವೆಂಬರ್ 1956ರಂದು ಜ್ಞಾನ ಸನ್ಯಾಸತ್ವ ಸ್ವೀಕರಿಸಿದರು. ನಂತರ ಚಲಿಸುವ ಜ್ಞಾನದೇಗುಲವಾಗಿ ಅಸಂಖ್ಯಾತ ಚೇತನಗಳಿಗೆ ಅರಿವಿನ ಬೆಳಕನಿತ್ತು ಹರಿವ ಜ್ಞಾನಗಂಗೆಯಾಗಿ, ದೇಶದಾದ್ಯಂತ ಪ್ರವಚನಗಳ ಮೂಲಕ ಜನಮನದಲ್ಲಿ ಬಸವ ತತ್ವದ ಬೀಜ ಬಿತ್ತಿ; ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ, ಎತ್ತಿ ನೋಡಿದರೆ ಲಿಂಗವೆಂಬ ಗೊಂಚಲು, ಒತ್ತಿ ಹಿಂಡಿದರೆ ಭಕ್ತಿ ಎಂಬ ರಸ’ ಎಂಬ ವಾತವರಣ ಸೃಷ್ಟಿಸಿದ ಪಾವನ ಚೇತನ ಪೂಜ್ಯಶ್ರೀಯವರ ಬದುಕು ಬಸವ ತತ್ವಕ್ಕೆ ಜೀವಾಳವಾಯಿತು. ತಮ್ಮದೇ ಆದ ವಾಗ್ಮಿತ್ವದಿಂದ ಎಲ್ಲರನ್ನು ಎಚ್ಚರಿಸುತ್ತ ಧೀಮಂತ ವ್ಯಕ್ತತ್ವದಿಂದ ಆಕರ್ಷಿಸುತ್ತ ಜನರಲ್ಲಿ ಧರ್ಮವನ್ನು ಕುರಿತು ಶ್ರದ್ಧೆ, ಆಸಕ್ತಿ ಹುಟ್ಟಿಸಿದ ಪ್ರತಿಭಾವಂತ ಪ್ರವಚನಕಾರ ಲಿಂಗಾನಂದರು ಬಸವ ಯುಗದ ಪುನರುತ್ಥಾನಕ್ಕೆ ನಾಂದಿ ಹಾಡಿದ ಚೇತನಶಕ್ತಿ ಎಂದರೆ ಅತಿಶಯೋಕ್ತಿಯಾಗಲಾರದು.

ಆರಂಭಿಕ ಜೀವನ

ವಿದ್ಯಾಭ್ಯಾಸ

ಗುರು ಬಸವಣ್ಣನವರ ಸಾಕ್ಷಾತ್ಕಾರ

ಪ್ರವಚನ ಪಿತಾಮಹ

ಲಿಂಗೈಕ್ಯ