ಓಂ ಶ್ರೀ ಗುರು ಬಸವ ಲಿಂಗಾಯ ನಮಃ
866666
ಬಸವ ಧರ್ಮ ಮಹಾಜಗದ್ಗುರು ಪೀಠ
ಬಸವ ಪೀಠವು ಎದ್ದು | ಒಸೆದು ನಾಣ್ಯವು ಹುಟ್ಟಿ
ಬಸವನ ಮುದ್ರೆ ಮೆರೆದಾವು | ಧರೆಯವಗೆ
ವಶವಾಗದಿಹುದೆ ಸರ್ವಜ್ಞ ?||
ಕೂಡಲಸಂಗಮ ಸುಕ್ಷೇತ್ರವು ಚಾರಿತ್ರಿಕ ಹಿನ್ನೆಲೆಯನ್ನೊಳಗೊಂಡ, ಸುಪ್ರಸಿದ್ಧ ಸಂಗಮೇಶ್ವರ ದೇವಾಲಯವನ್ನು ಹೊಂದಿದ ಧಾರ್ಮಿಕ ಸ್ಥಾನ. ಕೃಷ್ಣಾ-ಮಲಪ್ರಭಾ ನದಿಗಳ ಸಂಗಮದಿಂದಾಗಿ, ಇದೀಗ ಬಸವ ಸಾಗರ ಜಲಾಶಯದ ನಿರ್ಮಾಣದಿಂದಾಗಿ ಪ್ರಾಕೃತಿಕ ಚೆಲುವಿನಿಂದ ಶೋಭಿಸುತ್ತಿರುವ ಸುಂದರ ತಾಣ. ಚಿನ್ನಕ್ಕೆ ಸುವಾಸನೆ ಬಂದಂತೆ ಇಂತಹ ಕ್ಷೇತ್ರದ ಮಹಿಮೆ ವಿಶ್ವವಿಖ್ಯಾತಿಯನ್ನು ಹೊಂದುವಂತಾಗಿರುವುದು ವಿಶ್ವಗುರು ಬಸವಣ್ಣನವರ ಪಾದ ಸ್ಪರ್ಶದಿಂದಾಗಿ. “ಮಹಾಮಹಿಮ ಸಂಗನ ಬಸವಣ್ಣನು ಪಾದವಿಟ್ಟುದು ಅವಿಮುಕ್ತ ಕ್ಷೇತ್ರ” ಎಂದು ಜಗನ್ಮಾತೆ ಅಕ್ಕಮಹಾದೇವಿ ನುಡಿದ ಪ್ರಕಾರ ಕೂಡಲ ಸಂಗಮವು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರವಾಗಿ ಇಂದು ಪುಣ್ಯಭೂಮಿಯಾಗಿ ಕಂಗೊಳಿಸುತ್ತಿದೆ. ಮುಸಲ್ಮಾನರಿಗೆ ಮೆಕ್ಕಾ, ಸಿಖ್ಖರಿಗೆ ಅಮೃತಸರ, ಬೌದ್ಧರಿಗೆ ಬುದ್ಧಗಯೆ ಮಹತ್ವದ ಧರ್ಮಕ್ಷೇತ್ರಗಳಾದಂತೆ ಬಸವ ಧರ್ಮೀಯರಾದ ಲಿಂಗಾಯತರಿಗೆ ಕೂಡಲ ಸಂಗಮವೇ ಧರ್ಮಕ್ಷೇತ್ರ.
ಇಂತಹ ಕೂಡಲ ಸಂಗಮ ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಬೇಕೆಂಬ ಉದ್ದೇಶದಿಂದ ಶ್ರೀ ಗುರು ಬಸವಣ್ಣನವರ ದಿವ್ಯಪ್ರೇರಣೆಯಂತೆ, ಬಸವ ಧರ್ಮ ಪೀಠ ಎಂಬ ವಿಶ್ವಸ್ಥಸಂಸ್ಥೆ (ಟ್ರಸ್ಟ್)ಯೊಂದನ್ನು ಮುಂಬಯಿಯ 1950ನೇ ಟ್ರಸ್ಟ್ ಆಕ್ಟ್ ಪ್ರಕಾರ ನೋಂದಾಯಿಸಲಾಗಿತ್ತು. ಈ ಕಾಯ್ದೆ ರದ್ದಾದ ಮೇಲೆ ಇಂಡಿಯನ್ ಟ್ರಸ್ಟ್ ಆಕ್ಟ್ ಪ್ರಕಾರ ನೋಂದಾಯಿಸಲಾಗಿದೆ. ಲಿಂ. ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳು ಗೌರವಾಧ್ಯಕ್ಷರಾಗಿ, ಲಿಂ. ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರು ಕಾರ್ಯಾಧ್ಯಕ್ಷರಾಗಿ ಸಾಗಿ ಬಂದ ಈ ಟ್ರಸ್ಟಿನ ಇಂದಿನ ಕಾರ್ಯಾಧ್ಯಕ್ಷರಾಗಿ ಪರಮಪೂಜ್ಯ ಶ್ರೀಮನ್ನಿರಂಜನ ಮಹಾ ಜಗದ್ಗುರು ಮಾತೆ ಗಂಗಾದೇವಿಯವರು, ಕೋಶಾಧ್ಯಕ್ಷರಾಗಿ ಪೂಜ್ಯ ಶ್ರೀ ಸದ್ಗುರು ಮಹಾದೇಶ್ವರ ಸ್ವಾಮೀಜಿಯವರು, ಸದಸ್ಯರಾಗಿ ಪೂಜ್ಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ, ಪೂಜ್ಯ ಶ್ರೀ ಜಗದ್ಗುರು ಬಸವಕುಮಾರ ಸ್ವಾಮೀಜಿ, ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಕಾರ್ಯ ನಿರ್ವಹಿಸುತ್ತಿದ್ದು ಈ ಸಂಸ್ಥೆಗಾಗಿ ಪೂಜ್ಯ ಶ್ರೀ ಜಗದ್ಗುರು ಮಾತೆ ದಾನೇಶ್ವರಿ, ಪೂಜ್ಯ ಶ್ರೀ ಸದ್ಗುರು ಮಾತೆ ಬಸವರತ್ನಾದೇವಿ, ಪೂಜ್ಯ ಶ್ರೀ ಜಗದ್ಗುರು ಮಾತೆ ಜ್ಞಾನೇಶ್ವರಿ, ಪೂಜ್ಯ ಶ್ರೀ ಸದ್ಗುರು ಮಾತೆ ಕಸ್ತೂರಿದೇವಿ, ಪೂಜ್ಯ ಶ್ರೀ ಸದ್ಗುರು ಮಾತೆ ಸರ್ವಮಂಗಳಾದೇವಿ, ಪೂಜ್ಯ ಶ್ರೀ ಮಾತೆ ಸತ್ಯಾದೇವಿ, ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ, ಪೂಜ್ಯ ಶ್ರೀ ಸದ್ಗುರು ಚಂದ್ರಶೇಖರಾನಂದ ಸ್ವಾಮೀಜಿ, ಪೂಜ್ಯ ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿ, ಪೂಜ್ಯ ಶ್ರೀ ಸದ್ಗುರು ಬಸವ ಪ್ರಕಾಶ ಸ್ವಾಮೀಜಿ, ಪೂಜ್ಯ ಶ್ರೀ ಸದ್ಗುರು ಅನಿಮಿಷಾನಂದ ಸ್ವಾಮೀಜಿ, ಪೂಜ್ಯ ಶ್ರೀ ಸದ್ಗುರು ಮಾತೆ ವಿಜಯಾಂಬಿಕೆಯವರು ಹಗಲಿರುಳು ದುಡಿಯುತ್ತಿದ್ದಾರೆ.
ಬಸವ ಧರ್ಮ ಪೀಠ ಟ್ರಸ್ಟ್ ಸುಮಾರು 26 ಎಕರೆ ಜಮೀನನ್ನು ಖರೀದಿಸಿದ್ದು ಇಲ್ಲಿ ‘ಮಹಾಮನೆ’ ಎಂಬ ಮಹಾಮಠವು ನಿರ್ಮಾಣವಾಗಿದೆ. ಈಗಾಗಲೇ ಚನ್ನಬಸವೇಶ್ವರ ಜ್ಞಾನಮಂಟಪ ಎಂಬ ಪುಸ್ತಕ ಮಳಿಗೆಯ ಕಟ್ಟಡ, ನೀರಿನ ಟ್ಯಾಂಕ್‍ಗಳು ನಿರ್ಮಾಣಗೊಂಡಿದ್ದು ‘ಮಹಾಮನೆ’ ಎಂಬ ಆಡಳಿತ ಕಟ್ಟಡವು ಪೂರ್ಣಗೊಂಡಿದೆ. ‘ಗಣಲಿಂಗ ಮಂಟಪ’ ಎಂಬ ಮುಖ್ಯ ಆಲಯ 10 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ದಿ.14-01-1996 ರಂದು ಸ್ಥಾಪನೆಗೊಂಡ ಗಣಲಿಂಗವು ವಿಶೇಷ ಶಕ್ತಿ ಕೇಂದ್ರವಾಗಿದ್ದು ದರ್ಶನಕ್ಕೆ ಲಭ್ಯವಿದೆ. ಬಸವ ಧ್ಯಾನ ಮಂಟಪವು 8 ಲಕ್ಷ ರೂ.ಗಳ ವೆಚ್ಚದಲ್ಲಿ ಸಿದ್ಧವಾಗಿದ್ದು ಗುರು ಬಸವಣ್ಣನವರ ದಿವ್ಯ ಮೂರ್ತಿಯನ್ನು ಹೊಂದಿದೆ. ಬಸವ ಧರ್ಮದ ಮಹಾಜಗದ್ಗುರು ಪೀಠದ ಪ್ರಥಮ ಅಧಿಕಾರಿಗಳಾದ ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು ಲಿಂ. ಲಿಂಗಾನಂದ ಮಹಾಸ್ವಾಮೀಜಿಗಳ ಹಾಗೂ ದ್ವೀತಿಯ ಅಧಿಕಾರಿಗಳಾದ ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು ಲಿಂ. ಡಾ. ಮಾತೆ ಮಹಾದೇವಿಯವರ ಶರಣಾಲಯ (ಗದ್ದುಗೆಯು) ಕಮಲದಾಕೃತಿಯಲ್ಲಿ ರೂಪುಗೊಂಡಿದೆ. 20 ಶರಣರ ಮಂಟಪಗಳು, ಭವ್ಯ ಮತ್ತು ದಿವ್ಯವಾಗಿವೆ. ಜೀವನದಲ್ಲಿ ಯಾವುದೆ ಶುಭ ಪ್ರಸಂಗ, ಮದುವೆ, ನೌಕರಿ ಪ್ರಾಪ್ತಿ, ಮಗುವಿನ ಜನನ, ಗೃಹ ಪ್ರವೇಶ, ಉದ್ಯಮ ಪ್ರಾರಂಭ ಇತ್ಯಾದಿ ನಡೆದಾಗ ತಪ್ಪದೆ ಬಂದು ಬಸವ ಮಹಾಮಂಟಪದಲ್ಲಿ ಸ್ವತಃ ಪೂಜೆ ಸಲ್ಲಿಸಿ, ದಾಸೋಹ ಮಾಡಿಸಿ ಕಾಣಿಕೆ ನೀಡಿ ಧರ್ಮಗುರುವಿಗೆ ಕೃತಜÐತೆ ತೋರಿಸಿರಿ.
ಸದ್ಭಕ್ತರಿಗೆ ದೊರಕುವ ಸೌಲಭ್ಯಗಳು
ಕೂಡಲಸಂಗಮ ಸುಕ್ಷೇತ್ರವನ್ನು ಮಹಾಮನೆ ಮಹಾಮಠವನ್ನು ಸಂದರ್ಶಿಸುವ ಯಾತ್ರಾರ್ಥಿಗಳಿಗೆ ದಾಸೋಹದ ವ್ಯವಸ್ಥೆ ಇರುತ್ತದೆ. ಬೆಳಿಗ್ಗೆ 10 ಗಂಟೆಯಿಂದ 11-30 ರವರೆಗೆ ಉಪಾಹಾರವನ್ನು, ಮಧ್ಯಾಹ್ನ 12 ರಿಂದ 4 ರವರೆಗೆ ಊಟವನ್ನು ಕೊಡಲಾಗುವುದು. 50 ಕೋಣೆಗಳ “ಅಕ್ಕನಾಗಲಾಂಬಿಕಾ ಶರಣ ಧಾಮ” 80 ಕೋಣೆಗಳ “ಸರ್ವಜ್ಞ ಶರಣ ಧಾಮ” 32 ಕೋಣೆಗಳ “ಹರಳಯ್ಯ ಶರಣ ಧಾಮ” 25 ಕೋಣೆಗಳ “ಸಿದ್ಧರಾಮೇಶ್ವರ ಶರಣ ಧಾಮ” 32 ಕೋಣೆಗಳ “ಹಡಪದ ಅಪ್ಪಣ್ಣ ಶರಣ ಧಾಮ” 32 ಕೋಣೆಗಳ “ಶಾಂತರಸ ಶರಣ ಧಾಮ” 15 ಕೋಣೆಗಳ “ಅಕ್ಕಮಹಾದೇವಿ ಶರಣ ಧಾಮ” 15 ಕೋಣೆಗಳ “ಕಲ್ಯಾಣಮ್ಮ ಶರಣ ಧಾಮ” 27 ಕೋಣೆಗಳ “ಫ.ಗು ಹಳಕಟ್ಟಿ ಶರಣ ಧಾಮ” ಇರುವುದರಿಂದ ವಸತಿಯ ಸೌಲಭ್ಯ ಯಾತ್ರಾರ್ಥಿಗಳಿಗೆ ಲಭ್ಯವಾಗುತ್ತದೆ. ಪ್ರತ್ತೇಕವಾದ ಸಾರ್ವಜನಿಕ ಸೌಚಾಲಯ ಮತ್ತು ಸ್ನಾನ ಗೃಹಗಳೂ ಸಿದ್ಧವಾಗಿವೆ. ಶಾಲೆ-ಕಾಲೇಜುಗಳ ಪ್ರವಾಸಿ ತಂಡದವರು ಮತ್ತು ಇನ್ನಿತರ ಪ್ರವಾಸಿ ತಂಡದವರಿಗೆ ಪೂರ್ವಭಾವಿ ಬೇಡಿಕೆಯೊಡನೆ ಉಪಾಹಾರ-ಊಟಗಳನ್ನು ಸಿದ್ಧಪಡಿಸಿ ಕೊಡಲಾಗುವುದು. ವಿವಾಹ ಕಾರ್ಯಕ್ಕೆ ದೊಡ್ಡ ಸಭಾ ಭವನ, ವಾಸ್ತವ್ಯಕ್ಕೆ ಕೋಣೆಗಳು, ಪಾತ್ರೆ ಮುಂತಾದ ಸೌಕರ್ಯಗಳು ಲಭ್ಯವಿರುವುದರಿಂದ ಮದುವೆಗಳನ್ನು ಮಾಡುವುದಕ್ಕೂ ಸೂಕ್ತ ಅನುಕೂಲತೆಗಳಿವೆ.
ಧನ ಸಹಾಯಕ್ಕೆ ಮನವಿ
ಕೂಡಲಸಂಗಮ ಸುಕ್ಷೇತ್ರ ದರ್ಶನಕ್ಕೆ ಬಂದವರಿಗೆ ವಸತಿ-ಊಟಗಳ ಸೌಲಭ್ಯ ಇಲ್ಲದ್ದನ್ನು ಗಮನಿಸಿ ಬಸವ ಧರ್ಮ ಪೀಠ ಟ್ರಸ್ಟ್ ರಚಿಸಿ ಹಲವಾರು ಕಾರ್ಯಗಳನ್ನು ಮಾಡಲಾಗುತ್ತಿದೆ. ಶರಣರ ಮಂಟಪಗಳನ್ನು ವಿಸ್ತರಿಸಲಾಗುತ್ತಿದೆ. ಸಾಮೂಹಿಕ ವಸತಿ ಗೃಹ “ಸಿದ್ಧರಾಮೇಶ್ವರ ಶರಣ ಧಾಮ”ದ ನಿರ್ಮಾಣ ಪೂರೈಸುತ್ತಿದೆ. ಬಸವಾಲಯ ಎಂಬ ಪೂಜಾ ಮಂದಿರವನ್ನು ಮತ್ತು ಪ್ರವಚನ ಮಂದಿರವೊಂದನ್ನು ನಿರ್ಮಿಸಲಾಗುತ್ತಿದೆ. ಬಸವ ಭಾರತಿ ಶಾಲಾ ಕಟ್ಟಡವನ್ನು ಮತ್ತು ಅನಾಥ ಮಕ್ಕಳಿಗೆ ವಸತಿ ವ್ಯವಸ್ತೆಯ ನಿರ್ಮಾಣವಾಗುತ್ತಿದೆ. ಇವೆಲ್ಲವುಗಳ ನಿರ್ಮಾಣಕ್ಕೆ ಹಣದ ಅವಶ್ಯಕತೆ ಬಹಳವಿದೆ. 1. ಹೆಚ್ಚಿನ ಪ್ರಮಾಣದಲ್ಲಿ ಅಂದರೆ 4 ಲಕ್ಷ ರೂ.ಗಳ ಮೇಲೆ ಧನ ಸಹಾಯ ಮಾಡುವವರ ಹೆಸರಿನಲ್ಲಿ ಪ್ರವಾಸಿಧಾಮದ ಬೇರೆ ಬೇರೆ ಬ್ಲಾಕುಗಳನ್ನು ಕಟ್ಟಿಸಲಾಗುತ್ತದೆ. 2. ಡಬ್ಬಲ್ ಕೋಣೆ (ಶೌಚಾಲಯ-ಸ್ನಾನಗೃಹಗಳೊಡನೆ)ಗೆ 5 ಲಕ್ಷ ರೂ. 3. ಸಿಂಗಲ್ ಕೋಣೆ (ಶೌಚಾಲಯ ಸ್ನಾನಗೃಹಗಳೊಡನೆ)ಗೆ 2 ಲಕ್ಷ ರೂ. ಈ ರೀತಿ ಕೊಟ್ಟವರ ಹೆಸರುಗಳನ್ನು ಕೆತ್ತಿಸಿ ಆಯಾ ಕೋಣೆಗಳ ಮುಂದೆ ಶಿಲಾಫಲಕಗಳನ್ನು ಹಾಕಲಾಗುವುದು. ದಾಸೋಹ ನಿಧಿಗೆ 5000/- ರೂ. ಮತ್ತು 2500/- ರೂ. ಕೊಟ್ಟರೆ ಆ ಹಣವನ್ನು ಪುದುವಟ್ಟಾಗಿ (ಈಆ) ಇಟ್ಟು ಅದರ ಬಡ್ಡಿಯಲ್ಲಿ ನಿತ್ಯ ದಾಸೋಹವನ್ನು ಮತ್ತು ನಿತ್ಯ ಪೂಜೆಯನ್ನು ನಡೆಸಲಾಗುವುದು. ಶರಣ ಮೇಳ ಉತ್ಸವ ನಿರ್ವಹಣೆಗೆ ನಿಧಿಯೊಂದನ್ನು ರಚಿಸುತ್ತಿದ್ದು ಕನಿಷ್ಠ 10,000/- ರೂ.ಗಳಿಂದ ಮೇಲೆ ನಿಧಿಗೆ ಕೊಟ್ಟು ಅದರ ಬಡ್ಡಿಯನ್ನು ಶರಣ ಮೇಳ ನಿರ್ವಹಣೆಗೆ ಬಳಸಲು ದಾನಿಗಳು ಸೂಚಿಸಬಹುದು. ಬಸವ ಧರ್ಮ ಪೀಠ ಟ್ರಸ್ಟಿನ ಅಕೌಂಟ ನಂ. 10818354684, ಸ್ಟೇಟ್ ಬ್ಯಾಂಕ್ ಆಫ ಇಂಡಿಯಾ, ಕೂಡಲಸಂಗಮ, ಐ.ಎಫ್.ಎಸ್. ಕೋಡ್ SಃIಓ 0007172. ಇನ್ನಕಮ್ ಟ್ಯಾಕ್ಸದಲ್ಲಿ 80ಜಿ ರಿಯಾಯಿತಿಯ ಸೌಲಭ್ಯವೂ ಇದೆ.