Contact Info

Latest Posts

ಬಸವೋತ್ಸವ

ಚಿನ್ಮಯ ಜ್ಞಾನಿ ಚನ್ನಬಸವೇಶ್ವರ ಜ್ಞಾನ ಪೀಠ

ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿರುವ ಬಸವ ಗಂಗೋತ್ರಿ ಆಶ್ರಮ

ವಿಶ್ವಕಲ್ಯಾಣ ಮಿಷನ್ ಸಂಸ್ಥೆಯು ಬೆಂಗಳೂರಿನಲ್ಲಿ 1975 ರಲ್ಲಿ ವಿಧ್ಯುಕ್ತವಾಗಿ ಪ್ರಾರಂಭವಾಗಿ, 1977 ರಲ್ಲಿ ಇಂಡಿಯನ್ ಟ್ರಸ್ಟ್ ಆಕ್ಟ್ ಪ್ರಕಾರ ನೋಂದಣಿಯಾಯಿತು. ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು ಲಿಂಗಾನಂದ ಸ್ವಾಮೀಜಿಗಳು ಪ್ರಥಮ ಅಧ್ಯಕ್ಷರಾಗಿ, ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರು ದ್ವೀತಿಯ ಅಧ್ಯಕ್ಷರಾಗಿ ಹಾಗೂ ಇಗಿನ ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿಯವರು ತ್ರೀತಿಯ ಅಧ್ಯಕ್ಷರಾಗಿ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ ಬೆಂಗಳೂರಿನ ರಾಜಾಜಿನಗರದ 2ನೇ ಬ್ಲಾಕ್ 20ನೇ ಮುಖ್ಯರಸ್ತೆಯಲ್ಲಿ ಪ್ರಥಮ ಬಸವ ಮಂಟಪವು ನಿರ್ಮಾಣವಾಗಿ 1975ರ ಬಸವ ಜಯಂತಿಯಂದು ಉದ್ಘಾಟನೆಗೊಂಡಿತ್ತು. 1978 ರಲ್ಲಿ ವಿಶ್ವಕಲ್ಯಾಣ ಮಿಷನ್ ಟ್ರಸ್ಟ್ ಕುಂಬಳಗೊಡು ಗ್ರಾಮ ವ್ಯಾಪ್ತಿಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಿಶಾಲವಾದ ಜಮಿನನ್ನು ಖರೀದಿಸಿತ್ತು. ಇದು “ಬಸವ ಗಂಗೋತ್ರಿ ಆಶ್ರಮ” ಎಂಬ ಹೆಸರು ಹೊಂದಿದೆ. ಇಲ್ಲಿ ಬಸವ ತತ್ವ ತರಬೇತಿ ಶಿಬಿರಗಳನ್ನು, ಅನಾಥಾಲಯ ಮತ್ತು ವೃದ್ಧಾಶ್ರಮಗಳನ್ನು ನಡೆಸಲಾಗುತ್ತದೆ.

ಬಸವ ಗಂಗೋತ್ರಿಯಲ್ಲಿ ಬಸವಾಲಯವೊಂದನ್ನು ನಿರ್ಮಿಸಿದ್ದು ಇದರೊಳಗೆ ವಿಶ್ವಗುರು ಬಸವಣ್ಣನವರ ಪಂಚಲೋಹದ ಪುತ್ಥಳಿಯನ್ನು ಸ್ಥಾಪಿಸಿ ನಿತ್ಯವೂ ಪೂಜೆ-ಪ್ರಾರ್ಥನೆಗಳು ಕ್ರಮಬದ್ಧವಾಗಿ ನಡೆಸಲಾಗುತ್ತಿದೆ. ಬಸವ ಗಂಗೋತ್ರಿ ಆಶ್ರವiದಲ್ಲಿ ಪ್ರಾರ್ಥನಾ ಮಂಟಪ, ಬಸವ ಮಂಟಪದಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ.

ಬಸವ ಗಂಗೋತ್ರಿಯಲ್ಲಿ ಆಗಾಗ ಬಸವ ತತ್ವ ತರಬೇತಿ ಶಿಬಿರವನ್ನು, ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆಯಾದರೂ 2010ನೇ ಇಸ್ವಿಯಿಂದ ವಾರ್ಷಿಕ ಉತ್ಸವವನ್ನಾಗಿ ಬಸವೋತ್ಸವವನ್ನು ನಡೆಸುವ ಸಂಕಲ್ಪ ತಳೆಯಲಾಗಿದೆ. ಜಗದ್ಗುರು ಶ್ರೀ ಚೆನ್ನಬಸವೇಶ್ವರ ಜ್ಞಾನ ಪೀಠವು ಸ್ಥಾಪನೆ ಗೊಂಡಿದ್ದು ಪೂಜಾ ನಿಷ್ಠರು, ಬಹುಭಾಷಾ ಪರಿಣಿತರು, ಜ್ಞಾನಿಗಳು, ತ್ಯಾಗಿಗಳು, ಉತ್ತಮ ಸಂಘಟಕರೂ ಆಗಿರುವ ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮಿಗಳು ಇಲ್ಲಿನ ಪೀಠಾಧಿಕಾರಿಗಳಾಗಿದ್ದಾರೆ.

ಭಕ್ತರಿಗೆ ಪ್ರಸಾದದ ವ್ಯವಸ್ಥೆ ಇರುವುದರಿಂದ ಸಾರ್ವಜನಿಕರಿಂದ ಉದಾರವಾದ ದೇಣಿಗೆಯನ್ನು ಕೋರುತ್ತೇವೆ. ಒಬ್ಬೊಬ್ಬರು ಒಂದು ಹೊತ್ತಿನ ಪ್ರಸಾದದ ವ್ಯವಸ್ಥೆಯನ್ನು ವಹಿಸಿಕೊಳ್ಳಬಹುದು. ದೂರವಾಣಿ ಮೂಲಕ ವಿವರ ಪಡೆಯಬಹುದು.
1. ಮಹಾಪೋಷಕರು : 20,000 ರೂ. ಮತ್ತು ಮೇಲೆ ಕೊಟ್ಟವರು.
2. ಪೋಷಕರು : 10,000 ರೂ. ಮತ್ತು ಮೇಲೆ ಕೊಟ್ಟವರು.
3. ದಾನಿಗಳು : 5,000 ರೂ. ಮತ್ತು ಮೇಲೆ ಕೊಟ್ಟವರು.
4. ಹಿತೈಷಿಗಳು : 3,000 ರೂ.

ಸಂಪರ್ಕಿಸುವ ವಿಳಾಸ

ಪರಮಪೂಜ್ಯ ಶ್ರೀ ಬಸವಯೋಗಿ ಸ್ವಾಮೀಜಿ

ಪೀಠಾಧ್ಯಕ್ಷರು ಚಿನ್ಮಯ ಜ್ಞಾನಿ ಚನ್ನಬಸವೇಶ್ವರ ಜ್ಞಾನ ಪೀಠ

ಬಸವ ಗಂಗೋತ್ರಿ, ಬೆಂಗಳೂರು-ಮೈಸೂರು ಹೆದ್ದಾರಿ

ಕುಂಬಳಗೊಡು, ಬೆಂಗಳೂರು ದಕ್ಷಿಣ ತಾ|| -560074

ಜಂಗಮ ವಾಣಿ : 8073442105

ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು

ಡಾ. ಮಾತೆ ಗಂಗಾದೇವಿಯವರು

ಕಾರ್ಯಾಧ್ಯಕ್ಷರು, ಬಸವ ಧರ್ಮ ಪೀಠ

ನಂ. 2035, 20ನೇ ಮುಖ್ಯ ರಸ್ತೆ, 2ನೇ ಹಂತ

ರಾಜಾಜಿನಗರ, ಬೆಂಗಳೂರು – 560010

Leave a Reply

Your email address will not be published. Required fields are marked*