Contact Info

Latest Posts

ಗಣಮೇಳ

ಅಲ್ಲಮಪ್ರಭು ಯೋಗ ಪೀಠ,ಅಲ್ಲಮಗಿರಿ

ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಕರ್ನಾಟಕ ರಾಜ್ಯದ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಎಂಬ ಆಧ್ಯಾತ್ಮಿಕ ಸಂಸ್ಥೆಯನ್ನು ಕಟ್ಟಿ, ಅದರರಲ್ಲಿ ಶೂನ್ಯಪೀಠ ಎಂಬ ಧರ್ಮಪೀಠವನ್ನು ಸ್ಥಾಪಿಸಿ ಅದಕ್ಕೆ ವ್ಯೋಮಕಾಯ ಸಿದ್ಧರಾದ ಅಲ್ಲಮ ಪ್ರಭುದೇವರನ್ನು ಮೊದಲನೆಯ ಅಧಿಕಾರಿಯನ್ನಾಗಿ ಪೀಠಾರೋಹಣ ಮಾಡಿಸಿದರು. ಶ್ರೀ ಅಲ್ಲಮ ಪ್ರÀಭುದೇವರು ಸೊಲ್ಲಾಪುರದ ಶ್ರೀ ಸಿದ್ಧರಾಮೇಶ್ವರರು ಧರ್ಮ ಪ್ರಚಾರಾರ್ಥ ಇಂದಿನ ಕರ್ನಾಟಕ, ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲೆಲ್ಲ ಗಂಗೆ-ಯಮುನೆಯರಂತೆ ಸಂಚರಿಸಿ ಭಕ್ತರನ್ನು ಉದ್ಧರಿಸಿದ್ದಾರೆ. ಜೊತೆಗೂಡಿ ಸಂಚರಿಸಿದ ಉಭಯತರೂ ಒಂದು ವಿಶಿಷ್ಟ ಸ್ಥಳದಿಂದ ಪರಸ್ಪರ ಬೀಳ್ಕೂಟ್ಟು ಸಾಭಾರಿ ಜಂಗಮರಾದ ಶ್ರೀ ಸಿದ್ಧರಾಮೇಶ್ವರರು ಸೊಲ್ಲಾಪುರಕ್ಕೆ ಕರ್ತವ್ಯ ಮುಖಿಯಾಗಿ ವಾಪಸ್ಸು ಹೊರಡುತ್ತಾರೆ. ನಿರಾಭಾರಿ ಜಂಗಮರಾದ ಶ್ರೀ ಅಲ್ಲಮಪ್ರಭುದೇವರು ಅಶ್ವಾರೋಹಿಯಾಗಿ ಶಿಷ್ಯರೊಡನೆ ಸಂಚಾರವನ್ನು ಮುಂದುವರೆಸುತ್ತಾರೆ. ಒಂದು ಸ್ಥಳದಲ್ಲಿ ತಪೋಮಗ್ನರಾಗಿ ತಂಗಿರುತ್ತಾರೆ. ಅದೇ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಹಾತ್‍ಕಣಂಗಲೆ ತಾಲ್ಲೋಕಿನ ಅಳತೆ ಗ್ರಾಮದ ಬಳಿ ಇರುವ ಅಲ್ಲಮಪ್ರಭು ಗಿರಿ ಮರಾಠಿಯಲ್ಲಿ ಅಲ್ಲಮಪ್ರಭು ಡೋಂಗರ್ ಎನ್ನುತ್ತಾರೆ. ಇದು ಕೊಲ್ಹಾಪುರದಿಂದ 25 ಕಿ.ಮೀಟರ್ ದೂರದಲ್ಲಿ ಕೊಲ್ಹಾಪುರ-ಸಾಂಗ್ಲಿ-ಸೊಲ್ಲಾಪುರ ಹೆದ್ದಾರಿಯ ಮೇಲಿದೆ. ಸಮೀಪದಲ್ಲಿ ಇಚಲಕರಂಜಿ, ಮೀರಜ್, ಸಾಂಗ್ಲಿ ಮತ್ತು ವಡಗಾಂವ ಪಟ್ಟಣಗಳು ಇವೆ. ಹಾತ್‍ಕಣಂಗಲೆಯವರೆಗೆ ರೇಲ್ವೆ ಸೌಲಭ್ಯವಿದೆ.

ಅಲ್ಲಮಪ್ರಭು ನಂದಾದೀಪ
ಶ್ರೀ ಅಲ್ಲಮ ಪ್ರಭುದೇವರು ಪೂಜೆಯ ಸಮಯದಲ್ಲಿ ಹಚ್ಚಿದ ಜ್ಯೋತಿಯನ್ನು ಅಲ್ಲಮಪ್ರಭು ದಿವ್ಯಾಲಯದ ಪೂಜಾರಿ ವಂಶಸ್ಥರು ನಂದಾದೀಪವಾಗಿ ಕಾಯ್ದುಕೊಂಡು ಬಂದಿರುವುದು ಸ್ಥಳದ ವಿಶೇಷ. ಶ್ರೀ ಸಿದ್ಧರಾಮೇಶ್ವರರ ದಿವ್ಯಾಲಯವು ಸಹ ಪಕ್ಕದಲ್ಲೇ ಇದ್ದು ಕೆಲವು ಕಾಲ ಅವರು ಸಹ ಈ ಗಿರಿಯಲ್ಲಿ ತಂಗಿದ್ದಾರೆ. ಈ ಉಭಯತರೂ ಪೂಜೆ-ಧ್ಯಾನಗಳಿಗೆ ಬಳಸುತ್ತಿದ್ದ ಗವಿಯು ಶ್ರೀ ಸಿದ್ಧರಾಮೇಶ್ವರರ ದಿವ್ಯಾಲಯದ ಕೆಳಗೆ ಇದೆ. ಅಲ್ಲಮಪ್ರಭು ಗಿರಿಗೆ ಸುಮಾರು 4 ಕಿ. ಮೀ ದೂರದಲ್ಲಿ ಸಿದ್ಧರಾಮೇಶ್ವರ ಗಿರಿ (ಸಿದ್ದೋಬಾ ಡೋಂಗರ್)ಇದ್ದು ಎತ್ತರವಾದ ಆ ಗುಡ್ಡದ ಮೇಲೆ ಸಹ ಸಿದ್ಧರಾಮೇಶ್ವರ ದಿವ್ಯಾಲಯವಿದೆ. ಈ ಜಂಗಮ ಕ್ಷೇತ್ರಗಳು ಹೆಚ್ಚಿನ ಪ್ರಚಾರವನ್ನು ಪಡೆಯದೆ ಇರುವುದು ಮತ್ತು ಯಾವುದೇ ವಿಶೇಷ ಅಭಿವೃದ್ದಿ ಹೊಂದದಿರುವುದು ವಿಷಾದನೀಯ ಸಂಗತಿಯಾಗಿದೆ.

ಅಲ್ಲಮಪ್ರಭು ಮಠ ನಿರ್ಮಾಣ
ಕೂಡಲಸಂಗಮದ ಬಸವ ಧರ್ಮ ಪೀಠ ಟ್ರಸ್ಟ್ ಶರಣರ ಸ್ಥಾನಗಳನ್ನು ಅಭಿವೃದ್ಧಿಪಡಿಸುವ ಆಶಯವನ್ನು ಹೊಂದಿದ್ದು ಅಲ್ಲಮಪ್ರಭು ಗಿರಿ(ಡೋಂಗರ್)ಯಲ್ಲಿ ಜಗದ್ಗುರು ಅಲ್ಲಮಪ್ರಭು ದಿವ್ಯಾಲಯಕ್ಕೆ ಹತ್ತಿರದಲ್ಲಿ ದಿ. 31-01-2006 ರಂದು 14 ಎಕರೆಯಷ್ಟು ಜಮೀನನ್ನು ಖರೀದಿಸಿದೆ. ಬೋರ್‍ವೆಲ್ ತೋಡಿಸಿ, ನೀರಿನ ತೊಟ್ಟಿಯ ನಿರ್ಮಾಣ ಮಾಡಲಾಗಿದೆ. ಒಂದು ಕಾರ್ಯಾಲಯವನ್ನು ಸಹ ಕಟ್ಟಿಸಲಾಗಿದೆ.

ಶೂನ್ಯ ಪೀಠಾಧೀಶ ಅಲ್ಲಮ ಪ್ರಭುದೇವರು ಮತ್ತು ಕಾಯಕ ಯೋಗಿ ಸಿದ್ಧರಾಮೇಶ್ವರರು ಪಾದವಿಟ್ಟ ಈ ಜಂಗಮಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆಂದು ಲಿಂಗಾಯತ ಸಮಾಜದ ಸಂಘಟನೆಯ ದೃಷ್ಟಿಯಿಂದ ಮಹಾರಾಷ್ಟ್ರ ಶರಣ ಬಂಧುಗಳ ಬೇಡಿಕೆಯಂತೆ 2006ನೇ ಇಸವಿ ಚೈತ್ರ ಶುದ್ಧ ಪ್ರತಿಪದೆ ಯುಗಾದಿಯ ಅಲ್ಲಮಪ್ರಭು ಪೀಠಾರೋಹಣ ಸಂಸ್ಮರಣ ದಿನಕ್ಕೆ ಹೊಂದಿಕೊಂಡು ಮಾರ್ಚ್ ತಿಂಗಳಿಗೆ 29 ಮತ್ತು 30ನೇ ದಿನಾಂಕಗಳಂದು ಪ್ರಥಮ ಲಿಂಗಾಯತ ಗಣ ಮೇಳ ಮಾಡಲಾಯಿತು. ಇದೆ ಪ್ರತಿವರ್ಷ ಕೂಡಲಸಂಗಮ ಬಸವ ಧರ್ಮ ಪೀಠ, ಮಹಾರಾಷ್ಟ್ರ ರಾಷ್ಟ್ರೀಯ ಬಸವ ದಳಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಅಲ್ಲಮಪ್ರಭು ಗಿರಿಯಲ್ಲಿ ಲಿಂಗಾಯತ ಗಣಮೇಳವನ್ನು ಮಾಡಲಾಗುತ್ತಿದೆ. ಲಿಂಗಾಂಗ ಯೋಗಿಗಳಾದ ಪೂಜ್ಯ ಶ್ರೀ ಜಗದ್ಗರು ಬಸವ ಕುಮಾರ ಸ್ವಾಮೀಜಿಗಳು ಅಲ್ಲಮಪ್ರಭು ಯೋಗ ಪೀಠದ ಪೀಠಾಧಿಕಾರಿಗಳಾಗಿದ್ದಾರೆ.

ಗಣ ಮೇಳಕ್ಕೆ ಧನ ಸಹಾಯ

ಲಿಂಗಾಯತ ಗಣಮೇಳಕ್ಕೆ ಧನ ಸಹಾಯ ಮಾಡುವವರಿಗೆ ಕೆಳಗಿನಂತೆ ಅವಕಾಶವಿದೆ
1. ಮಹಾಪೋಷಕರು : 20,000 ರೂ. ಮತ್ತು ಮೇಲೆ ಕೊಟ್ಟವರು.
2. ಪೋಷಕರು : 10,000 ರೂ. ಮತ್ತು ಮೇಲೆ ಕೊಟ್ಟವರು.
3. ದಾನಿಗಳು : 5,000 ರೂ. ಮತ್ತು ಮೇಲೆ ಕೊಟ್ಟವರು.
4. ಹಿತೈಷಿಗಳು : 3,000 ರೂ.
5. ಸ್ವಾಗತ ಸಮಿತಿ ಸದಸ್ಯತ್ವ : 1,000 ರೂ.
6. ಪ್ರತಿನಿಧಿ ಶುಲ್ಕ : 300 ರೂ.

ಸ್ವಯಂ ಪ್ರೇರಣೆಯಿಂದ ಅವರವರ ಶಕ್ತ್ಯಾನುಸಾರ ಎಷ್ಟು ಬೇಕಾದರು ಕಾಣಿಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಳಾಸಕ್ಕೆ, ಜಂಗಮವಾಣಿಗೆ ಸಂಪರ್ಕಿಸಬಹುದು.

ಸಂಪರ್ಕಿಸುವ ವಿಳಾಸ

ಪೂಜ್ಯ ಶ್ರೀ ಜಗದ್ಗುರು ಬಸವಕುಮಾರ ಸ್ವಾಮೀಜಿ

ಪೀಠಾಧ್ಯಕ್ಷರು ಅಲ್ಲಮಪ್ರಭು ಯೋಗ ಪೀಠ 

ಅಲ್ಲಮಗಿರಿ, ಅಳತೆ, ಹಾತ್‍ಕಣಂಗಲೆ,

 ಮಹಾರಾಷ್ಟ್ರ

ಜಂಗಮ ವಾಣಿ : 9449588669

ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು

ಡಾ. ಮಾತೆ ಗಂಗಾದೇವಿಯವರು

ಕಾರ್ಯಾಧ್ಯಕ್ಷರು, ಬಸವ ಧರ್ಮ ಪೀಠ

ನಂ. 2035, 20ನೇ ಮುಖ್ಯ ರಸ್ತೆ, 2ನೇ ಹಂತ

ರಾಜಾಜಿನಗರ, ಬೆಂಗಳೂರು – 560010

Leave a Reply

Your email address will not be published. Required fields are marked*