ಓಂ ಶ್ರೀ ಗುರು ಬಸವ ಲಿಂಗಾಯ ನಮಃ
866666
ಕಲ್ಯಾಣ ಪರ್ವ
ಅಲ್ಲಮಪ್ರಭು ಶೂನ್ಯ ಪೀಠ, ಬಸವಕಲ್ಯಾಣ
ಬೀದರ್ ಜಿಲ್ಲೆಯಲ್ಲಿರುವ ಬಸವ ಕಲ್ಯಾಣವು 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿತ್ತು. ಲಿಂಗದೇವನ ಅನುಗ್ರಹವಾಗಿ ಇಷ್ಟಲಿಂಗದ ಪರಿಕಲ್ಪನೆ ಮೂಡಿ ಧರ್ಮಪೀತರು ಲಿಂಗಾಯತ ಧರ್ಮದ ರೂಪು ರೇಷೆ ಹಾಕಿದುದು ಕೂಡಲಸಂಗಮದಲ್ಲಿ ಆ ನೀಲನಕ್ಷೆಯು ಕಾರ್ಯರೂಪಕ್ಕೆ ಬಂದುದು ಬಸವ ಕಲ್ಯಾಣದಲ್ಲಿ. “ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಸಂಗನ ಬಸವಣ್ಣ ಬಂದು ಕಲ್ಯಾಣದಲ್ಲಿ ಮಹಾಮನೆಯ ಕಟ್ಟಿದಡೆ ಮತ್ರ್ಯಲೋಕವೆಲ್ಲವೂ ಭಕ್ತಿ ಸಾಮ್ರಾಜ್ಯವಾಯಿತು” ಎಂದು ಬಸವಯೋಗಿ ಸಿದ್ಧರಾಮೇಶ್ವರರು ಹೆಳುವಂತೆ, “ಅಯ್ಯಾ, ಭಕ್ತಿಗೆ ಬೀಡಾದುದು ಕಲ್ಯಾಣ 36 ವರ್ಷ, ಅನುಭವಕ್ಕೆ ಶಿವಸದನವಾದುದು 27 ವರ್ಷ” ಎಂದು ಧರ್ಮಪಿತರು ಸಾರುವಂತೆ ಬಸವಕಲ್ಯಾಣವು ವಿಕ್ರಮನಾಮ ಸಂವತ್ಸರ (ಕಿ.ಶ.1160)ದಿಂದ ರಾಕ್ಷಸನಾಮ ಸಂವತ್ಸರ (ಕಿ.ಶ. 1196)ದ ವರೆಗೆ ವಿಶ್ವಗುರು ಬಸವಣ್ಣನವರ ಪರುಷ ಪಾದದಿಂದ ಭಕ್ತಿಯ ಬೀಡಾಗಿತ್ತು. ಈ ಪವಿತ್ರ ಶರಣ ಭೂಮಿಯು ಇಂದು ನಮಗೆಲ್ಲ ಧರ್ಮ ಭೂಮಿ. ಇಂಥ ಸುಕ್ಷೇತ್ರದಲ್ಲಿ ಒರ್ಷಕ್ಕೊಮ್ಮೆಯಾದರೂ ಬಸವ ಭಕ್ತರು ಸಮಾವೇಶವಾಗಬೇಕೆಂದು 2002ನೇ ಇಸವಿಯಿಂದಲೂ “ಕಲ್ಯಾಣ ಪರ್ವ” ಎಂಬ ವಾರ್ಷಿಕ ಉತ್ಸವವನ್ನು ಅಲ್ಲಮಪ್ರಭು ಶೂನ್ಯ ಪೀಠದ ಪೀಠಾರೋಹಣ ಮಾಡುವ ಮೂಲಕ ಪ್ರತಿ ವರ್ಷ ಅಕ್ಟೋಬರ್ 11, 12 ಮತ್ತು 13ರಂದು ನಡೆಸಲಾಗುತ್ತಿದೆ. ಪೂಜ್ಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿಯವರು ಇಲ್ಲಿನ ಪೀಠಾಧಿಕಾರಿಗಳಾಗಿದ್ದಾರೆ.
ಕಲ್ಯಾಣ ಪರ್ವದಲ್ಲಿ ಮೋದಲನೆಯ ದಿನ ಬೆಳಿಗ್ಗೆ 10:30ಕ್ಕೆ ಉದ್ಘಾಟನೆ ಮತ್ತು ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ 3:30 ರಿಂದ 5:30ರ ವರೆಗೆ ರಾಷ್ಟ್ರೀಯ ಬಸವ ದಳದ ಮಹಾ ಸಮಾವೇಶ, ಸಂಜೆ 6:30 ರಿಂದ ಚಿಂತನಗೋಷ್ಠಿ. ಎರಡನೆಯ ದಿನ ಬೆಳಿಗ್ಗೆ 7:30ಕ್ಕೆ ಶರಣ ವಂದನೆ-ಶರಣರಿಗೆ ಶರಣು ಶರಣಾರ್ಥಿ, ಬೆಳಿಗ್ಗೆ 10:30ಕ್ಕೆ ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ 3:30 ರಿಂದ 5:30ರ ವರೆಗೆ ಆಶುಭಾಷಣ ಸ್ಪರ್ಧೆ, ಸಂಜೆ 6:30 ರಿಂದ ಚಿಂತನಗೋಷ್ಠಿ. ಮೂರನೇ ದಿನ ಅಕ್ಕನಾಗಲಾಂಬಿಕೆ ಸಂಸ್ಮರಣೆಯ ನಿಮಿತ್ತ ಬಸವ ಧರ್ಮ ವಿಜಯೋತ್ಸವ ಕಾರ್ಯಕ್ರಮ ನಂತರ ಅಲ್ಲಮಪ್ರಭು ಶೂನ್ಯ ಪೀಠಾರೋಹಣ ಮತ್ತು ಸಮಾರೋಪ ಸಮಾರಂಭ ನಡೆಯುತ್ತದೆ.
ಕಲ್ಯಾಣ (ಗಣ) ಪರ್ವಕ್ಕೆ ಧನ ಸಹಾಯ
ಕಲ್ಯಾಣ ಎಂಬುದು ಒಂದು ಸ್ಥಳದ ಹೆಸರು; ಮತ್ತು ವಿಶ್ವಗುರು ಬಸವಣ್ಣನವರ ಧ್ಯೇಯವೇ ಎಲ್ಲ ಮಾನವರ ಲೇಸು -ಕಲ್ಯಾಣ. ಆದರ್ಶ ಕಲ್ಯಾಣ ರಾಜ್ಯ ನಿರ್ಮಾಣವೆ ಅವರ ಹೋರಾಟದ ಗುರಿಯಾಗಿತ್ತು. ಗಣ ಎಂದರೆ ಸಮೂಹ, ಪರ್ವ ಎಂದರೆ ಹಬ್ಬ. ಶರಣ ಗಣವು ಶರಣ ಭೂಮಿ ಬಸವಕಲ್ಯಾಣದಲ್ಲಿ ನೆರೆದು ಆದಿ ಶರಣರ ಜೀವನ-ಸಾಧನೆ-ಸಂದೇಶವನ್ನು ಕೊಂಡಾಡುವ ಹಬ್ಬ ಈ ಕಲ್ಯಾಣ ಪರ್ವ. ಅಂದು ಧರ್ಮಪಿತ ಬಸವಣ್ಣನವರು ಗಣಪರ್ವಗಳನ್ನು ಕಲ್ಯಾಣದಲ್ಲಿ ನಡೆಸುತಿದ್ದು, ಭಕ್ತರು ಅಂಗ, ವಂಗ ಕಳಿಂಗ, ಗುರ್ಜರ, ಸಿಂಹಳ ಮುಂತಾದ ಭಾಗಗಳಿಂದೆಲ್ಲ ಸಮಾವೇಶವಾಗುತಿದ್ದುದಾಗಿ ಹರಿಹರ, ಸಿಂಗಿರಾಜ ಮುಂತಾದವರು ತಮ್ಮ ಕಾವ್ಯಗಳಲ್ಲಿ ಬಣ್ಣಿಸುತ್ತಾರೆ. ಅಂಥ ಗಣ ಪರ್ವವನ್ನು ಇಂದು ನೀವು ನಾವು ಮಾಡಿ ತೋರಿಸಬೇಕಾಗಿದೆ. ಕಲ್ಯಾಣ ಪರ್ವದಲ್ಲಿ ಸಮಾವೇಶವಾಗುರು ಶರಣ ಬಂಧುಗಳಿಗೆ ವಸತಿ ಮತ್ತು ಪ್ರಸಾದದ ವ್ಯವಸ್ತೆ ಮಾಡಬೇಕಾಗುತ್ತದೆ. ಭವ್ಯವಾದ ಸಭಾಮಂಟಪ, ಶಾಮಿಯಾನಾ ಕೊಠಡಿಗಳು, ವಿಶಾಲವಾದ ಪ್ರಸಾದ (ಊಟ)ಮಂಟಪ ಮುಂತಾದವುಗಳ ವ್ಯವಸ್ಥೆ ಮಾಡಲು ಅಪಾರವಾದ ಹಣದ ಅವಶ್ಯಕತೆ ಇರುತ್ತದೆ. ದನಿಗಳು ಮುಂದೆ ಸೂಚಿಸಿದಂತೆ ಧನ ಸಹಾಯ ಮಾಡಬಹುದು. ಶರಣ ಬಂಧುಗಳು ಒಂದು ಹೊತ್ತಿನ ಪ್ರಸಾದ ದಾಸೋಹದ ವೆಚ್ಚವನ್ನು ಭರಿಸಲೂ ಅವಕಾಶ ಉಂಟು.
01. ಮಹಾಪೋಷಕರು : 20,000 ರೂ. ಮತ್ತು ಮೇಲೆ ಕೊಟ್ಟವರು.
02. ಪೋಷಕರು : 10,000 ರೂ. ಮತ್ತು ಮೇಲೆ ಕೊಟ್ಟವರು.
03. ದಾನಿಗಳು : 5,000 ರೂ. ಮತ್ತು ಮೇಲೆ ಕೊಟ್ಟವರು.
04. ಹಿತೈಷಿಗಳು : 30,000 ರೂ.
05. ಸ್ವಾಗತ ಸಮಿತಿ ಸದಸ್ಯತ್ವ : 1,000 ರೂ.
06. ಪ್ರತಿನಿಧಿ ಶುಲ್ಕ : 300 ರೂ.
ಅನ್ನ ದಾಸೋಹಕ್ಕಾಗಿ ಭಕ್ತಿ ಪೂರ್ವಕ ಕಾಣಿಕೆಗಳನ್ನು ಶಕ್ತ್ಯಾನುಸಾರ ಕೊಡಬಹುದು.
ವಿ.ಸೂ. : ವಾರ್ಷಿಕ ಸಮಾವೇಶವಾದ ಕಲ್ಯಾಣ ಪರ್ವಕ್ಕೆ ತಮ್ಮ ಕೊಡುಗೆ ನಿರಂತರವಾಗಿರಲಿ ಎಂದು ಇಷ್ಟವಿದ್ದವರು 10,000/15,000 ರೂ. ಗಳ ಪುದುವಟ್ಟು ಇಡಲು ದೇಣಿಗೆ ನೀಡಿದರೆ ಈ ಪುದುವಟ್ಟಿನ ಬಡ್ಡಿಯ ಹಣವನ್ನು ಕಲ್ಯಾಣ ಪರ್ವ ದಾಸೋಹಕ್ಕೆ ವಿನಿಯೋಗಿಸಲಾಗುವುದು. ರಸೀದಿ ಪುಸ್ತಕ, ಕರಪತ್ರಗಳನ್ನು ಪಡೆದು ದೇಣಿಗೆ ಸಂಗ್ರಹಿಸುವವರಿಗೂ ಅವಕಾಶವಿದೆ.
ಶರಣ ಭೂಮಿ ಬಸವ ಕಲ್ಯಾಣದಲ್ಲಿ ವಿವಿಧ ಯೋಜನೆಗಳು
ಬಸವ ಧರ್ಮ ಪೀಠ (ರಿ.) ಟ್ರಸ್ಟ ವತಿಯಿಂದ ಶರಣ ಸಂಸ್ರøತಿಯ ಪುನರುತ್ಥಾನ ಮಾಡಬೇಕೆಂದು ಸಂಕಲ್ಪಿಸಿ ದಿನಾಂಕ 21.12.2001 ರಂದು ರಾಷ್ಟ್ರೀಯ ಹೆದ್ದಾರಿ 9 ರಿಂದ ಬಸವ ಕಲ್ಯಾಣಕ್ಕೆ ಹೋಗುವ ಮುಖ್ಯ ರಸ್ತೆಯ ಬದಿಗೆ 3 ಎಕರೆ ಜಮೀನನ್ನು ಖರೀದಿಸಲಾಯಿತು. ಪುನಃ ಹದಿನೇಳೂವರೆ ಎಕರೆ ಖರೀದಿಸಿ ಬಸವ ಮಹಾಮನೆ ಎಂಬ ಹೆಸರಿನಲ್ಲಿ ಮಠವನ್ನು ಸ್ಥಾಪಿಸಿರುವುದೇ ಅಲ್ಲದೆ ನಿತ್ಯ ದಾಸೋಹ, ಹುಣ್ಣಿಮೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. 12ನೇ ಶತಮಾನದ ಧಾರ್ಮಿಕ ವೈಭವ 21ನೆಯ ಈ ಶತಮಾನದಲ್ಲಿ ನಡೆಯುವಂತೆ ಕಾರ್ಯೋನ್ಮುಖವಾಗಬೇಕಾಗಿದೆ. ಅದು ಶರಣರ ಸಂಕಲ್ಪಕೂಡ. ಹೇಗೆಂದರೆ ಬಸವಣ್ಣನವರು ಕಲ್ಯಾಣವನ್ನು ಗಡಿಪಾರಾಗಿ ಬಿಟ್ಟು ಹೋದ 770 ವರ್ಷಗಳ ನಂತರ ನಾವು ಬರುತ್ತೇವೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ. ಶರಣರು ಮುಕ್ತಾತ್ಮರಾದ ಕಾರಣ ಅವರು ಶರೀರಧಾರಿಗಳಾಗಿ ಬರುವುದಿಲ್ಲ; ಅವರ ಸಂದೇಶಗಳು ಪುನಃ ಪ್ರಚಾರಗೊಳ್ಳುತ್ತವೆ. ಅವರ ಸಂಕಲ್ಪಗಳು ಕಲ್ಯಾಣ ಕ್ರಾಂತಿಯಿಂದಾಗಿ ಅಪೂರ್ಣವಾಗಿ ಉಳಿದಿದ್ದವು. ಈಗ ಪೂರ್ಣಗೊಳ್ಳುವ ಕಾಲ ಬರುತ್ತದೆ ಎಂಬುದೇ ಅವರ ಸಂಕಲ್ಪದ ಮರ್ಮ. ಜಗ ಬದುಕಲಿ, ಜನ ಬದುಕಲಿ ಎಂದು ಆದಿ ಶರಣರು ವಚನಗಳನ್ನು ರಚಿಸಿದುದು ಮಾತ್ರವಲ್ಲ ವಚನ ಸಾಹಿತ್ಯವನ್ನು ನಾಶ ಮಾಡಬೇಕೆಂದು ಜಾತಿವಾದಿಗಳು ಪಣ ತೊಟ್ಟಾಗ, ತಮ್ಮ ಪ್ರಾಣವನ್ನು ಪಣಕಿಟ್ಟು ಹೋರಾಡಿ ವಚನ ವಾಙ್ಮಯವನ್ನು ರಕ್ಷಿಸಿದರು. ಆದಿ ಶರಣರ ಆ ಬಲಿದಾನದ ಋಣವನ್ನು ತೀರಿಸಬೇಕಾದ್ದು ಪ್ರತಿಯೊಬ್ಬ ಅನುಯಾಯಿಯ ಅಭಿಮಾನದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಸವ ಧರ್ಮ ಪೀಠ ಟ್ರಸ್ಟನ ಬಸವ ಕಲ್ಯಾಣ ಶಾಖೆಯಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಕಾಣಿಕೆ ನೀಡುವವರಿಗೆ ಕೆಳಗಿನಂತೆ ಅವಕಾಶವಿದೆ.
01. ನಿತ್ಯ ಪೂಜಾ ನಿಧಿ : ಶ್ರೀ ಗುರು ಬಸವಣ್ಣನವರ ಅರ್ಚನೆಗಾಗಿ ಪೂಜಾ ನಿಧಿ ಸಂಗ್ರಹ; ದಾನಿಗಳ ಹೆಸರಿನಲ್ಲಿ ಪೂಜೆ ರೂ. 1,500/- (ಒಂದೂವರೆ ಸಾವಿರ).
02. ದಾಸೋಹ ನಿಧಿ : ದಾಸೋಹಿಗಳು ಕೋಡುವ ಹಣವನ್ನು ನಿಧಿಯಾಗಿ ಇಟ್ಟು ಅದರ ಬಡ್ಡಿಯ ಹಣದಿಂದ ನಿತ್ಯ ದಾಸೋಹ ಏರ್ಪಡಿಸುವುದು ರೂ. 2,000/- (ಎರಡು ಸಾವಿರ).
03. ಪೂಜ್ಯ ಲಿಂಗಾನಂದ ಸ್ವಾಮೀಜಿ ಮಂಟಪ ನಿರ್ಮಾಣ : ಕಲ್ಯಾಣ ಪರ್ವ ಕಾರ್ಯಕ್ರಮ ನಡೆಸಲು ಭವ್ಯವಾದ ಸಭಾಮಂಟಪ ನಿರ್ಮಾಣಕ್ಕೆ ರೂ. 25,000/- (ಇಪ್ಪತ್ತೈದು ಸಾವಿರ).
04. ಶರಣ ಧಾಮ : ಬರುವ ಯಾತ್ರಿಕರಿಗಾಗಿ ಉಳಿಯಲು ವಸತಿ ಗೃಹಗಳನ್ನು ನಿರ್ಮಾಣ ಮಾಡುವುದು. ಸಿಂಗಲ್ ಕೋಣೆ ನಿರ್ಮಾಣಕ್ಕೆ ರೋ. 2,00,000/- (ಎರಡು ಲಕ್ಷ). ಡಬಲ್ ಕೋಣೆ ನಿರ್ಮಾಣಕ್ಕೆ ರೂ. 3,00,000/- (ಮೂರು ಲಕ್ಷ)ದಂತೆ ದಾನಿಗಳಿಂದ ಪಡೆಯಲಾಗುವುದು. ಒಂದು ಬಸ್ ಜನ ಉಳಿಯುವಂತೆ ಸಾಮೂಹಿಕ ವಸತಿ ಗೃಹ (ಆoಡಿmiಣoಡಿಥಿ) ಕಟ್ಟಿಸಲು ರೂ.4,00,000/- (ನಾಲ್ಕು ಲಕ್ಷ).
05. ಧರ್ಮಗುರು ಬಸವಣ್ಣನವರ ಜೀವನ ಚರಿತ್ರೆ : ಜನನ, ಬಾಲ್ಯ, ವಿವಾಹ, ಕರಣಿಕಕಾಯಕ, ಅನುಭವ ಮಂಟಪದಿಂದ ಹಿಡಿದು ಕಲ್ಯಾಣಕ್ರಾಂತಿವರೆಗೆ 32ಘಟನೆಗಳನ್ನು ಆಯ್ಕೆ ಮಾಡಲಾಗಿದ್ದು ಸಮಗ್ರ ಜೀವನ ಚರಿತ್ರೆ ನಿರ್ಮಾಣ ಮಾಡಲಾಗುತ್ತಿದೆ. ಒಂದೋಂದು ಘಟನೆಯ ಚಿತ್ರಕ್ಕೆ ರೂ. 1,50,000/- (ಒಂದೂವರೆ ಲಕ್ಷ) ಖರ್ಚು ಬರುತ್ತಿದೆ. ಕೊಟ್ಟ ದಾನಿಗಳ ಹೆಸರು ಮತ್ತು ಭಾವಚಿತ್ರವನ್ನು ದೃಶ್ಯದ ಮುಂದೆ ಪ್ರದರ್ಶಿಸಲಾಗುವುದು.
06. ಶರಣ ಗ್ರಾಮ : 12ನೇ ಶತಮಾನದ ಶರಣರು ತಮ್ಮ ಕಾಯಕಗಳೂಡನೆ ಇರುವ ಚಿತ್ರಣ. ಈಗಾಗಲೇ ಅನೇಕ ಕಾಯಕಗಳನ್ನು ಚಿತ್ರಿಸಲಾಗಿದೆ. ಇನ್ನೂ ಕೆಲವು ಕಾಯಕಗಳನ್ನು ಚಿತ್ರಿಸುವುದಿದೆ. ಒಂದು ಚಿತ್ರಣಕ್ಕೆ ಕೊಡಬೇಕೆನ್ನುವವರು ರೂ. 1,00,000/- (ಒಂದು ಲಕ್ಷ) ಕೊಡಬೇಕು. ಜನರ ನೆರವು ಸಿಕ್ಕಿದಂತೆ ಇನ್ನೂ ಹಲವಾರು ಯೋಜನೆಗಳನ್ನು ಹಾಕಲಾಗುವುದು. ಈಗಾಗಲೇ ಕೊಳವೆ ಭಾವಿ ಮತ್ತು ತೆರೆದ ಭಾವಿ ತೋಡಿಸಲಾಗಿದೆ. ನೀರಿನ ಟ್ಯಾಂಕ್‍ಗಳು, ಕಾರ್ಯಾಲಯ ಕಟ್ಟಡ, ಬಸವಾಲಯ ಪೂರ್ಣಗೊಂಡಿವೆ. ಆದ್ದರಿಂದ ಸಹೃದಯರು ಆದಷ್ಟು ಬೇಗನೆ ಉದಾರವಾಗಿ ಕಾಣಿಕೆಯನ್ನು ಸಲ್ಲಿಸಿ ಕೆಲಸವು ತ್ವರಿತಗತಿಯಲ್ಲಿ ಸಾಗುವಂತೆ ಪ್ರೋತ್ಸಾಹಿಸಬೇಕೆಂದು ಕೋರುತ್ತೇವೆ. ಶರಣ ಬಂಧುಗಳೆ, ನಿಮ್ಮ ಗಳಿಕೆಯ ಒಂದು ಪಾಲನ್ನು ಗುರು-ಲಿಂಗ-ಜಂಗಮದ ದಾಸೋಹಕ್ಕೆ ಸಲ್ಲಿಸುವುದು ನಿಮ್ಮ ಆದ್ಯ ಕರ್ತವ್ಯವೆಂದು ತಿಳಿದು ಉದಾರವಾಗಿ ಕಾಣಿಕೆ ಸಲ್ಲಿಸಿರಿ. ಬಸವ ಧರ್ಮ ಪೀಠದ ಧ್ಯೇಯೋದ್ದೇಶ ಪೂರೈಕೆಗೆ ನೀವು ಸಲ್ಲಿಸುವ ಕಾಣಿಕೆಯನ್ನು ಕೆಳಗಿನ ಮೂರು ವಿಳಾಸಗಳಲ್ಲಿ ಯಾವ ವಿಳಾಸಕ್ಕೂ ಕಳಿಸಬಹುದು. ಬ್ಯಾಂಕಿನ ಮೂಲಕ ವರ್ಗಾಯಿಸಬಹುದು.
ಸಂಪರ್ಕಿಸುವ ವಿಳಾಸ
ಪೂಜ್ಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ
ಪೀಠಾಧ್ಯಕ್ಷರು ಅಲ್ಲಮಪ್ರಭು ಶೂನ್ಯ ಪೀಠ
ಬಸವ ಕಲ್ಯಾಣ ಮುಖ್ಯ ರಸ್ತೆ,
ಬಸವಕಲ್ಯಾಣ, ಬೀದರ್ – 585327
ಜಂಗಮ ವಾಣಿ : 9448732456
ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು
ಡಾ. ಮಾತೆ ಗಂಗಾದೇವಿಯವರು
ಕಾರ್ಯಾಧ್ಯಕ್ಷರು, ಬಸವ ಧರ್ಮ ಪೀಠ
ನಂ. 2035, 20ನೇ ಮುಖ್ಯ ರಸ್ತೆ, 2ನೇ ಹಂತ
ರಾಜಾಜಿನಗರ, ಬೆಂಗಳೂರು – 560010