ಓಂ ಶ್ರೀ ಗುರು ಬಸವ ಲಿಂಗಾಯ ನಮಃ
866666

ಶರಣ ಮೇಳ

ಮಹಾಮಾನವತಾವಾದಿ, ಲಿಂಗಾಯತ ಧರ್ಮ ಸಂಸ್ಥಾಪಕ, ಶರಣ ಗಣಮಣಿ, ಧರ್ಮಗುರು ಬಸವಣ್ಣನವರ ಕಾರಣಿಕತ್ವ ಮತ್ತು ಸಂದೇಶಗಳಲ್ಲಿ ನಂಬಿಕೆ ಇಟ್ಟು ನಡೆಯುವ ಬಸವ ಭಕ್ತರು, ಬಸವ ಧರ್ಮೀಯರಾದ ಲಿಂಗಾಯತರು ಮತ್ತು ಬಸವ ತತ್ತ್ವಾಭಿಮಾನಿಗಳೆಲ್ಲರೂ ವರ್ಷಕ್ಕೆ ಒಮ್ಮೆಯಾದರೂ ಒಂದು ಸ್ಥಳದಲ್ಲಿ ಸಮಾವೇಶವಾಗುವುದು ಅತ್ಯಂತ ಅವಶ್ಯಕ. ಇದು ಸಮಾನತ್ವ ಮತ್ತು ಸಹೋದರತ್ವ ಬೆಳೆಸಲು ಸಹಕಾರಿಯಾಗುವುದು ಎಂಬ ಉದ್ದೇಶದಿಂದ ಆದಿ ಶರಣರ ಸಂಕಲ್ಪದಂತೆ ಶರಣ ಮೇಳವನ್ನು ನಡೆಸಲಾಗುತ್ತಿದೆ. ಧರ್ಮಕರ್ತ ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲಸಂಗಮವನ್ನು ಲಿಂಗಾಯತ (ಬಸವ) ಧರ್ಮೀಯರ ಧರ್ಮಕ್ಷೇತ್ರ ಎಂದು ಗುರುತಿಸಿಕೊಂಡು 1988ರ ಜನವರಿ 14, 15 ಮತ್ತು 16ರಂದು ಪ್ರಥಮ ಚಾರಿತ್ರಿಕ ಶರಣ ಮೇಳವನ್ನು ನಡೆಸಲಾಯಿತು. ಮೊಟ್ಟ ಮೊದಲನೆಯ ಚಾರಿತ್ರಿಕ ಶರಣ ಮೇಳವು ಎರಡೂವರೆ ಲಕ್ಷಕ್ಕೂ ಮಿಕ್ಕಿದ ಜನ ಸಮೂಹವನ್ನು  ಆಕರ್ಷಿಸಿತು.

ಇಂತಹ ಶರಣ ಮೇಳವು ಪ್ರತಿವರ್ಷವು ಬಸವ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಜನವರಿ 11, 12, 13 ಮತ್ತು 14 ರಂದು ನಡೆಯುತ್ತದೆ. ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗಪೂಜೆ, ಗಣಲಿಂಗ ದರ್ಶನ ಶರಣ ಮೇಳದ ಪ್ರಮುಖ ಧಾರ್ಮಿಕ ವಿಧಿಗಳು, ಜನವರಿ 14 ರಂದು ಬೆಳಿಗ್ಗೆ 10 ರಿಂದ ಧ್ವಜಾರೋಹಣ, ಪಥಸಂಚಲನ ಸಮುದಾಯ ಪ್ರಾರ್ಥನೆ ಇರುತ್ತದೆ (ನಾಲ್ಕು ದಿನ ಭಾಗವಹಿಸಲು ಆಗದೆ ಇದ್ದವರು ಸಮುದಾಯ ಪ್ರಾರ್ಥನೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ.) ಸಂಜೆ 7 ಗಂಟೆಗೆ ಸಾಮೂಹಿಕ ಇಷ್ಟಲಿಂಗಾರ್ಚನೆ ಇರುತ್ತದೆ. ಇವುಗಳಲ್ಲಿ ಶರಣ ವ್ರತಿಗಳು ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. 40, 30, 20 ಮತ್ತು 10 ದಿವಸಗಳ “ಶರಣ ವ್ರತ”ವನ್ನು ಅವರವರ ಸಮಯಾವಕಾಶಕ್ಕೆ ತಕ್ಕಂತೆ ಸ್ವೀಕರಿಸಿ, ಆಚರಿಸಿ ಯಾರು ಬೇಕಾದರೂ ಶರಣ ಮೇಳದಲ್ಲಿ ಭಾಗಿಗಳಾಗಬಹುದು. ಚಿಂತನಗೋಷ್ಠಿ, ಉಪನ್ಯಾಸ, ಧಾರ್ಮಿಕ ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳಿಂದ ಕೂಡಿದ ಶರಣ ಮೇಳವು ಉತ್ತಮ ಜ್ಞಾನ ದಾಸೋಹದೊಡನೆ, ಅನ್ನದಾಸೋಹವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ದಿ. 11 ಮತ್ತು 12 ರಂದು ಧರ್ಮಚಿಂತನ ಗೋಷ್ಠಿ ನಡೆಯುತ್ತಿದ್ದು ಸಮಾಜ-ಧರ್ಮಗಳಿಗೆ ಸಂಭಂಧಪಟ್ಟಂತೆ ಮುಕ್ತ ಚರ್ಚೆಗೆ ಅವಕಾಶ ವಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಾಲ್ಗೊಳ್ಳಿರಿ.

ಶರಣ ಮೇಳಕ್ಕೆ ಧನ ಸಹಾಯ

ಶರಣ ಮೇಳವು ಬಸವ ಧರ್ಮೀಯರ ಜಾಗತಿಕ ಉತ್ಸವವಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದೆ. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಶರಣ ವ್ರತಿಗಳು ಆಗಮಿಸುವರು. ಜನವರಿ 10ನೆಯ ದಿನಾಂಕ ರಾತ್ರಿಯಿಂದ 14ನೆಯ ದಿನಾಂಕದ ರಾತ್ರಿಯವರೆಗೆ ಭಾಗಿಗಳಾಗುವ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗುವುದು ಬೆಳಗಿನ ಪ್ರಸಾದ (ಉಪಾಹಾರ), ಮಧ್ಯಾಹ್ನದ ಪ್ರಸಾದ (ಊಟ) ಮತ್ತು ರಾತ್ರಿಯ ಪ್ರಸಾದ (ಊಟ)ದ ವ್ಯವಸ್ಥೆ ಮಾಡಲಾಗುತ್ತದೆ. ಭವ್ಯವಾದ ಸಭಾಮಂಟಪ, ಶಾಮಿಯಾನಾ ಕೊಠಡಿಗಳು, ವಿಶಾಲವಾದ ಪ್ರಸಾದ (ಊಟ) ಮಂಟಪ ಮುಂತಾದವುಗಳ ವ್ಯವಸ್ಥೆ ಮಾಡಲು ಅಪಾರವಾದ ಹಣದ ಅವಶ್ಯಕತೆ ಇರುತ್ತದೆ. ದಾನಿಗಳು ಕೆಳಗಿನಂತೆ ಧನ ಸಹಾಯ ಮಾಡಬಹುದು. ಶರಣ ಬಂಧುಗಳು ಒಂದು ಹೊತ್ತಿನ ಪ್ರಸಾದ ದಾಸೋಹದ ವೆಚ್ಚವನ್ನು ಭರಿಸಲೂ ಅವಕಾಶ ಉಂಟು.
1. ಮಹಾಪೋಷಕರು : 20,000 ರೂ. ಮತ್ತು ಮೇಲೆ ಕೊಟ್ಟವರು.
2. ಪೋಷಕರು : 10,000 ರೂ. ಮತ್ತು ಮೇಲೆ ಕೊಟ್ಟವರು.
3. ದಾನಿಗಳು : 5,000 ರೂ. ಮತ್ತು ಮೇಲೆ ಕೊಟ್ಟವರು.
4. ಹಿತೈಷಿಗಳು : 3,000 ರೂ.
5. ಸ್ವಾಗತ ಸಮಿತಿ ಸದಸ್ಯತ್ವ : 1,000 ರೂ.
6. ಪ್ರತಿನಿಧಿ ಶುಲ್ಕ : 300 ರೂ.

ಸಂಪರ್ಕಿಸುವ ವಿಳಾಸ

ಪೂಜ್ಯ ಶ್ರೀ ಸದ್ಗುರು ಮಹಾದೇಶ್ವರ ಸ್ವಾಮೀಜಿ

 ಉಪಾಧ್ಯಕ್ಷರು, ಬಸವ ಧರ್ಮ ಪೀಠ   

ಕೂಡಲಸಂಗಮ – 587115

  ತಾ|| ಹುನಗುಂದ ಜಿ|| ಬಾಗಲಕೋಟೆ

ಜಂಗಮ ವಾಣಿ : 9341819847

ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು

ಡಾ. ಮಾತೆ ಗಂಗಾದೇವಿಯವರು

ಕಾರ್ಯಾಧ್ಯಕ್ಷರು, ಬಸವ ಧರ್ಮ ಪೀಠ

ನಂ. 2035, 20ನೇ ಮುಖ್ಯ ರಸ್ತೆ, 2ನೇ ಹಂತ

ರಾಜಾಜಿನಗರ, ಬೆಂಗಳೂರು – 560010