

ಲಿಂಗಾಯತ ಧರ್ಮ ಸಂಸ್ಥಾಪಕರು, ಮಹಾನ್ ಪ್ರವಾದಿ ಗುರು ಬಸವಣ್ಣನವರು
ಕೂಡಲಸಂಗಮ ಸುಕ್ಷೇತ್ರವು ಚಾರಿತ್ರಿಕ ಹಿನ್ನೆಲೆಯನ್ನೊಳಗೊಂಡ, ಸುಪ್ರಸಿದ್ಧ ಸಂಗಮೇಶ್ವರ ದೇವಾಲಯವನ್ನು ಹೊಂದಿದ ಧಾರ್ಮಿಕ ಸ್ಥಾನ. ಕೃಷ್ಣಾ-ಮಲಪ್ರಭಾ ನದಿಗಳ ಸಂಗಮದಿಂದಾಗಿ, ಇದೀಗ ಬಸವ ಸಾಗರ ಜಲಾಶಯದ ನಿರ್ಮಾಣದಿಂದಾಗಿ ಪ್ರಾಕೃತಿಕ ಚೆಲುವಿನಿಂದ ಶೋಭಿಸುತ್ತಿರುವ ಸುಂದರ ತಾಣ. ಚಿನ್ನಕ್ಕೆ ಸುವಾಸನೆ ಬಂದಂತೆ ಇಂತಹ ಕ್ಷೇತ್ರದ ಮಹಿಮೆ ವಿಶ್ವವಿಖ್ಯಾತಿಯನ್ನು ಹೊಂದುವಂತಾಗಿರುವುದು ವಿಶ್ವಗುರು ಬಸವಣ್ಣನವರ ಪಾದ ಸ್ಪರ್ಶದಿಂದಾಗಿ. “ಮಹಾಮಹಿಮ ಸಂಗನ ಬಸವಣ್ಣನು ಪಾದವಿಟ್ಟುದು ಅವಿಮುಕ್ತ ಕ್ಷೇತ್ರ” ಎಂದು ಜಗನ್ಮಾತೆ ಅಕ್ಕಮಹಾದೇವಿ ನುಡಿದ ಪ್ರಕಾರ ಕೂಡಲ ಸಂಗಮವು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರವಾಗಿ ಇಂದು ಪುಣ್ಯಭೂಮಿಯಾಗಿ ಕಂಗೊಳಿಸುತ್ತಿದೆ. ಮುಸಲ್ಮಾನರಿಗೆ ಮೆಕ್ಕಾ, ಸಿಖ್ಖರಿಗೆ ಅಮೃತಸರ, ಬೌದ್ಧರಿಗೆ ಬುದ್ಧಗಯೆ ಮಹತ್ವದ ಧರ್ಮಕ್ಷೇತ್ರಗಳಾದಂತೆ ಬಸವ ಧರ್ಮೀಯರಾದ ಲಿಂಗಾಯತರಿಗೆ ಕೂಡಲ ಸಂಗಮವೇ ಧರ್ಮಕ್ಷೇತ್ರ.
ಇಂತಹ ಕೂಡಲ ಸಂಗಮ ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಬೇಕೆಂಬ ಉದ್ದೇಶದಿಂದ ಶ್ರೀ ಗುರು ಬಸವಣ್ಣನವರ ದಿವ್ಯಪ್ರೇರಣೆಯಂತೆ, ಬಸವ ಧರ್ಮ ಪೀಠ ಎಂಬ ವಿಶ್ವಸ್ಥಸಂಸ್ಥೆ (ಟ್ರಸ್ಟ್)ಯೊಂದನ್ನು ಮುಂಬಯಿಯ 1950ನೇ ಟ್ರಸ್ಟ್ ಆಕ್ಟ್ ಪ್ರಕಾರ ನೋಂದಾಯಿಸಲಾಗಿತ್ತು. ಈ ಕಾಯ್ದೆ ರದ್ದಾದ ಮೇಲೆ ಇಂಡಿಯನ್ ಟ್ರಸ್ಟ್ ಆಕ್ಟ್ ಪ್ರಕಾರ ನೋಂದಾಯಿಸಲಾಗಿದೆ.
ಬಸವ ಧರ್ಮ ಪೀಠದ ಮಹಾ ಜಗದ್ಗುರುಗಳು

Poojya Lingananda Swamiji
ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗರು ಲಿಂಗಾನಂದ ಸ್ವಾಮೀಜಿಯವರು ವಿಶ್ವಗುರು ಬಸವಣ್ಣನವರು ಹುಟ್ಟಿದ ನಾಡಿನಲ್ಲಿ ಮಣಿಗವಳ್ಳಿಯ ಮಾಣಿಕ್ಯವಾಗಿ ದಿನಾಂಕ 15-09-1931 ರಂದು ಜನಿಸಿ. ಬಿ.ಎ. ಆನರ್ಸ್ ಪದವೀಧರರಾಗಿ ಬಸವಗುರುವಿನ ಪ್ರೇರಣೆಯಿಂದ 25-04-1955 ರಂದು ಆಧ್ಯಾತ್ಮಿಕ ಮಾನಸಾಂತರ ಹೊಂದಿ 19-11-1956 ರಂದು ಜ್ಞಾನ ಸನ್ಯಾಸವನ್ನು ಸ್ವೀಕರಿಸಿ ಅಂದಿನಿಂದ ಕೊನೆಯವರೆಗೆ ಒಂದು ದಿನವೂ ಬಿಡದಂತೆ ಪ್ರವಚನದ ಮೂಲಕ ಜ್ಞಾನ ದಾಸೋಹ ಮಾಡುತ್ತಿದ್ದಂತಹ ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜದ್ಗುರು ಲಿಂಗಾನಂದ ಸ್ವಾಮೀಜಿಯವರನ್ನು ಪ್ರವಚನ ಪಿತಾಮಹ, ಅಪೂರ್ವವಾಗ್ಮಿ, ಪ್ರತಿಭಾನ್ವಿತ ಚೇತನ, ಅಭಿನವ ವಿವೆಕಾನಂದ ಎಂದು ಸಮಾಜ ಕರೆಯುತ್ತಿದೆ.

Poojya Mate Mahadevi Mataji
ವಿಶ್ವದ ಪ್ರಪ್ರಥಮ ಮಹಿಳಾ ಮಹಾಜಗದ್ಗುರು ಪರಮಪೂಜ್ಯ ಶ್ರೀಮನ್ನಿರಂಜನ ಡಾ. ಮಾತೆ ಮಹಾದೇವಿಯವರು ಚಿನ್ಮೂಲಾದ್ರಿಯ ಚಿತ್ಕಳೆಯಾಗಿ 1946ರಲ್ಲಿ ಜನ್ಮಿಸಿ, ವಿಜ್ಞಾನ ತತ್ತ್ವಜ್ಞಾನ ಸ್ನಾತಕೋತ್ತರ ಪದವೀಧರೆಯಾಗಿ 1966ರಲ್ಲಿ ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು ಲಿಂಗೈಕ್ಯ ಲಿಂಗಾನಂದ ಸ್ವಾಮಿಜಿಗಳಿಂದ ಜಂಗಮ ದೀಕ್ಷೆ ಪಡೆದು, “ಮಾತೆ ಮಹಾದೇವಿ” ಎಂಬ ಅಭಿಧಾನ ತಾಳಿ, 1970ರಲ್ಲಿ ವಿಶ್ವ ವಿನೂತನ ಸ್ತ್ರೀ ಜಗದ್ಗುರು ಪೀಠವನ್ನಲಂಕರಿಸಿ, ಭಕ್ತಿ-ಜ್ಞಾನ-ವಿರಕ್ತಿಗಳ ದಿವ್ಯ ಸಂಗಮವಾಗಿ ಶೋಭಿಸಿದರು. ಕಿರಿದಾದ ವಯಸ್ಸಿನಲ್ಲಿಯೇ ಹಿರಿದಾದ ಜ್ಞಾನ ಗಳಿಸಿ, ಜಗದ ಜಾಗೃತಿಗಾಗಿ ಆ ಜ್ಞಾನಸುಧೆಯನ್ನು ಪ್ರವಚನ, ಗ್ರಂಥಗಳ ಮೂಲಕ ಜನತೆಗೆ ಧಾರೆಯೆರೆದಿದ್ದಾರೆ. ಶ್ರೀ ಮಾತಾಜಿಯವರ ಮೊದಲ ಕಾದಂಬರಿ “ಹೆಪ್ಪಿಟ್ಟ ಹಾಲು” ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಜಗನ್ಮಾತೆ ಅಕ್ಕಮಹಾದೇವಿಯವರ ಜೀವನ ಕುರಿತಾತ “ತರಂಗಿಣಿ” ಮಾತಾಜಿಯವರ ಹಸ್ತದಲ್ಲಿ ರೂಪುಗೊಂಡ ದ್ವಿತೀಯ ಕಾದಂಬರಿ.

Poojya Mate Gangadevi
ಬಸವಣ್ಣ ಹಾಗೂ ಸಮಕಾಲೀನ ಶರಣ, ಶರಣೆಯರ ಬದುಕು, ತತ್ವಗಳನ್ನು ಪ್ರವಚನ ಎಂಬ ಜಂಗಮ ಕಾಯಕದ ಭಿತ್ತರಿಸುತ್ತಿರುವ ಕೂಡಲಸಂಗಮ ಬಸವ ಧರ್ಮ ಪೀಠದ ಮೂರನೇ ಪೀಠಾಧ್ಯಕ್ಷರಾದ ಮಹಾ ಜಗದ್ಗುರು ಡಾ. ಮಾತೆ ಗಂಗಾದೇವಿಯವರು ಬೀದರ ಜಿಲ್ಲೆಯ ಚಟ್ನಳ್ಳಿ ಗ್ರಾಮದಲ್ಲಿ ಅಕ್ಟೋಬರ್ 16, 1958 ರಂದು ಜನಿಸಿದರು.
ಶರಣ. ಮಾಣಿಕ್ಯಪ್ಪ ಬೆಣ್ಣೆ, ಶರಣೆ. ಭಾಗೀರಥಿಬಾಯಿ ದಂಪತಿಗಳ ಮಗಳಾಗಿ ಜನಿಸಿದ ಗಂಗಮ್ಮನಿಗೆ ಪೂಜ್ಯಶ್ರೀ ಮಹಾಜಗದ್ಗುರು ಡಾ.ಮಾತೆ ಮಹಾದೇವಿ 16 ಜುಲೈ 1979 ರಂದು ಜಂಗಮ ದೀಕ್ಷೆ ನೀಡುವ ಮೂಲಕ ಮಾತೆ ಗಂಗಾದೇವಿ ಎಂದು ನಾಮಕರಣ ಮಾಡಿದರು.
ಪೂಜ್ಯಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಸ್ವಾಮೀಜಿ ಹಾಗೂ ಮಾತಾಜಿಯ ಆಧ್ಯಾತ್ಮಿಕ ಪರಿಸರದಲ್ಲಿ ಬೆಳದ ಮಾತೆ ಗಂಗಾದೇವಿ ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತತ್ವ ಸಿದ್ಧಾಂತದ ಮೂಲಕ ಮುನ್ನಡೆಯುತ್ತಿದ್ದಾರೆ.
ಬಸವ ಪೀಠವು ಎದ್ದು | ಒಸೆದು ನಾಣ್ಯವು ಹುಟ್ಟಿ ಬಸವನ ಮುದ್ರೆ ಮೆರೆದಾವು | ಧರೆಯವಗೆ ವಶವಾಗದಿಹುದೆ ಸರ್ವಜ್ಞ ?||
ಬಸವ ಧರ್ಮದ ಮಹಾಜಗದ್ಗುರು ಪೀಠದ ಅಡಿಯಲ್ಲಿ ಬರುವ ಪಂಚ ಪೀಠಗಳು

ಶೂನ್ಯ್ ಪೀಠಾಧೀಶ ಅಲ್ಲಮಪ್ರಭು ಯೋಗ ಪೀಠ, ಅಲ್ಲಮಗಿರಿ, ಮಹಾರಾಷ್ಟ್ರ

ವೀರ ಮಾತೇ ಅಕ್ಕ ನಾಗಲಾಂಬಿಕೆ ಅನುಭಾವ ಪೀಠ, ಉಳವಿ

ಅಕ್ಕಮಹಾದೇವಿ ಅನುಭಾವ ಪೀಠ, ಧಾರವಾಡ

ಅಲ್ಲಮಪ್ರಭು ಶೂನ್ಯ ಪೀಠ, ಬಸವಕಲ್ಯಾಣ

ಶೂನ್ಯ್ ಪೀಠಾಧೀಶ ಅಲ್ಲಮಪ್ರಭು ಯೋಗ ಪೀಠ, ಅಲ್ಲಮಗಿರಿ, ಮಹಾರಾಷ್ಟ್ರ

ವೀರ ಮಾತೇ ಅಕ್ಕ ನಾಗಲಾಂಬಿಕೆ ಅನುಭಾವ ಪೀಠ, ಉಳವಿ

ಅಕ್ಕಮಹಾದೇವಿ ಅನುಭಾವ ಪೀಠ, ಧಾರವಾಡ

ಅಲ್ಲಮಪ್ರಭು ಶೂನ್ಯ ಪೀಠ, ಬಸವಕಲ್ಯಾಣ
Call Us
+91 95919 38666
info@basavadharmapeetha.org
Call Us
+91 95919 38666
info@basavadharmapeetha.org
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
Basava Dharma Peetha Branches
Bengaluru
. Param Pujya Sri Basavayogi Swamiji
Bengaluru
. Param Pujya Sri Basavayogi Swamiji
Kudala Sangama
. Pujya Sri Mahadeshwara Swamiji
Kudala Sangama
. Pujya Sri Mahadeshwara Swamiji
Basava Kalyana
. Pujya Siddharameshwara Swamiji
Basava Kalyana
. Pujya Siddharameshwara Swamiji
Bidar
. Vijayambika Mataji
Bidar
. Vijayambika Mataji
Chitradurga
. Pujya Sri Mate Daneshwari
Chitradurga
. Pujya Sri Mate Daneshwari
Allamagiri Maharashtra
. Pujya Sri Basavakumara Swamiji
Allamagiri Maharashtra
. Pujya Sri Basavakumara Swamiji
Hyderabad AP
. Pujya Sri Animishananda Swamiji
Hyderabad AP
. Pujya Sri Animishananda Swamiji
Delhi
. Pujya Sri Mate Sarvamangala
Delhi
. Pujya Sri Mate Sarvamangala